Bhajan

Vrindavana Devi Namo Namo Song Lyrics in Kannada and English

Vrindavana Devi namo namo song Details:

LyricsSri Purandaravittala 

Vrindavana Devi namo namo Song Lyrics in Kannada

ವೃಂದಾವನದೇವಿ ನಮೋ ನಮೋ

ಚೆಲ್ವ ಮಂದರಧರನ ಪ್ರಿಯಳೆ

ವೃಂದಾವನ ದೇವಿ ನಮೋ ನಮೋ ||ಪ||

ನಿನ್ನ ಸೇವಿಸಿ ಉದಕವನೆರೆಯಲು

ಮುನ್ನ ಮಾಡಿದ ಪಾಪ ಪೋಗುವುದು

ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ

ಉನ್ನಂತ ವೈಕುಂಠ ಪದವೀವಳೆ ||1||

ಒಂದೊಂದು ದಳದಲ್ಲಿ ಒಂದೊಂದು ಮೂರುತಿ

ಸಂದಣಿಸಿವೆ ಬಹು ಗುಪುತದಲಿ

ಬಂದು ಕುಂಕುಮ ಶಂಖಚಕ್ರ ಧರಿಸಿದರೆ

ತಂದೆ ನಾರಾಯಣ ಕರೆದೊಯ್ಯುವ ||2||

ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ

ಕೊರಳೊಳು ಧರಿಸಿ ಕರ್ಣದೊಳಿಟ್ಟರೆ

ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ

ಹರಿ ತನ್ನವರೆಂದು ಕೈಯ ಪಿಡಿವ ||3||

ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ

ಉತ್ತಮ ವೈಕುಂಠ ಪದವೀವಳೆ

ಭಕ್ತಿಯಿಂದಲೆ ಬಂದು ಕೈಯ ಮುಗಿದವರನ್ನು

ಕರ್ತುನಾರಾಯಣ ಕರೆದೊಯ್ವನು ||4||

ಆವಾವಪರಿಯಲ್ಲಿ ಸೇವೆಯ ಮಾಡಲು

ಪಾವನ ವೈಕುಂಠಪದವೀವಳೆ

ದೇವ ಶ್ರೀ ಪುರಂದರವಿಠ್ಠಲರಾಯನ 

ದೇವಿ ನಿನ್ನ ಮುಟ್ಟಿ ತ್ರಾಹಿ ತ್ರಾಹಿಯೆಂಬೆ ||5||

Allso read:Gajavadana beeduve song lyrics in Kannada and English Ganesh Bhajan

Vrindavana Devi namo namo Song Lyrics in English

Vrindavana Devi namo namo

celva mandaradharana priyale

vrindavana Devi namo namo ||pa||

Ninna seevisi udakavanereyalu

munna  maadida paapa pooguvudu

enna ippattondu kuladavarigella

unnanta vaikuntha padavivale||1||

Ondondu daladalli ondondu muruthi
sandanisuve bahu guoutadali
bandu kunkuma shakha cakra dharidare

tande naaraayana karedgoyyuva||2|

Harige samarpisida tulasi nirmaalyava

 koralolu dharisi karnadolittare
durita raasigalella annji oodutalive
hari tannavarendu kaiya piḍiva ||3||

Hattu pradaksine hattu  vandane maade 
uttama vaikuntha padaviivale

bhaktiyindale bandu kai mugidavarannu

kartunaaraayana karedoyvanu||4||

Aavaavapariyalli seeveyannu maadidaru
paavana vaikunthapadaviivale

deva sri purandara vittala narayana

devi ninna mutti traahiyembe ||5||

Leave a Reply

Your email address will not be published. Required fields are marked *